🌿ಡೇವಿಸ್ ಕಪ್ (Davis Cup)
➤ಡೇವಿಸ್ ಕಪ್ (Davis Cup) ವಿಶ್ವದ ಅತಿದೊಡ್ಡ ಪುರುಷರ ತಂಡಾಧಾರಿತ ಟೆನಿಸ್ ಸ್ಪರ್ಧೆ ಆಗಿದ್ದು, ಇದನ್ನು ಬಹುಪಾಲು "Tennis World Cup" ಎಂದು ಕರೆಯಲಾಗುತ್ತದೆ.ಈ ಟೂರ್ನಿಯನ್ನು ಅಂತರಾಷ್ಟ್ರೀಯ ಟೆನಿಸ್ ಫೆಡರೇಶನ್ (ITF) ಆಯೋಜಿಸುತ್ತದೆ
➤ಇಟಲಿ ತಂಡವು 2025ರ ನವೆಂಬರ್ 24ರಂದು (ಭಾನುವಾರ) ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-0 ಅಂತರದಿಂದ ಸೋಲಿಸಿ ಸತತ ಮೂರನೇ ಬಾರಿಗೆ ಡೇವಿಸ್ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.ಇದು ಇಟಲಿಯ ಒಟ್ಟಾರೆ ನಾಲ್ಕನೇ ಡೇವಿಸ್ ಕಪ್ ಪ್ರಶಸ್ತಿಯಾಗಿದೆ.
🌿ಪ್ರಮುಖಾಂಶಗಳು:
✦ಗೆಲುವಿನ ವರ್ಷಗಳು: ಇಟಲಿ 1976, 2023, 2024 ಮತ್ತು 2025 ರಲ್ಲಿ ಡೇವಿಸ್ ಕಪ್ ಪ್ರಶಸ್ತಿಯನ್ನು ಗೆದ್ದಿದೆ.
✦ಐತಿಹಾಸಿಕ ಸಾಧನೆ: ಈ ಸತತ ಮೂರು ಗೆಲುವುಗಳೊಂದಿಗೆ, 1968 ರಿಂದ 1972 ರವರೆಗೆ ಸತತ ಐದು ಪ್ರಶಸ್ತಿಗಳನ್ನು ಗೆದ್ದಿದ್ದ ಯುನೈಟೆಡ್ ಸ್ಟೇಟ್ಸ್ ನಂತರ,ಡೇವಿಸ್ ಕಪ್ ಇತಿಹಾಸದಲ್ಲಿ ಸತತ ಮೂರು ಪ್ರಶಸ್ತಿಗಳನ್ನು ಗೆದ್ದ ಮೊದಲ ರಾಷ್ಟ್ರ ಇಟಲಿಯಾಗಿದೆ.
@ravindramudhol1

0 ಕಾಮೆಂಟ್‌ಗಳು