ಭಾರತೀಯ ರೈಲ್ವೆ Group-D ಹುದ್ದೆಗಳ ಭರ್ತಿ: ಅರ್ಜಿ ಆಹ್ವಾನ
ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಅಸಿಸ್ಟಂಟ್, ಟ್ರ್ಯಾಕ್ ಮೆಂಟೇನರ್, ಪೋಸ್ಟ್ ಮನ್ ಸೇರಿದಂತೆ ವಿವಿಧ Group-D ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಭರ್ತಿಯ ಮೂಲಕ ದೇಶದ ವಿವಿಧ ವಲಯಗಳಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ. ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಆಯ್ಕೆ ವಿಧಾನ ಹಾಗೂ ಇತರೆ ಪ್ರಮುಖ ಮಾಹಿತಿಯನ್ನು ಕೆಳಗೆ ವಿವರವಾಗಿ ನೀಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಮಾಹಿತಿಯನ್ನು ಪೂರ್ತಿಯಾಗಿ ಓದಬೇಕು.
ಭಾರತೀಯ ರೈಲ್ವೆಯಲ್ಲಿ ಬೃಹತ್ ನೇಮಕಾತಿ 2026 – RRB Group D Recruitment 2026
ಹುದ್ದೆಗಳ ವಿವರ:-
* ಅಸಿಸ್ಟಂಟ್
* ಟ್ರ್ಯಾಕ್ ಮೆಂಟೇನರ್
* ಪೋಸ್ಟ್ ಮನ್
* ಅಸಿಸ್ಟಂಟ್ ಟಿ.ಆರ್.ಡಿ (Assistant TRD)
* ಅಸಿಸ್ಟಂಟ್ ಆಪರೇಷನ್ಸ್ (ಇಲೆಕ್ಟ್ರಿಕಲ್)
* ಅಸಿಸ್ಟಂಟ್ ಟಿಎಲ್ & ಎಸಿ
* ಅಸಿಸ್ಟಂಟ್ (ಸಿಗ್ನಲ್ & ಟೆಲಿಕಮ್ಯುನಿಕೇಷನ್)
* ಪೋಸ್ಟ್ ಮನ್ ಬಿ
* ಅಸಿಸ್ಟಂಟ್ ಟ್ರ್ಯಾಕ್ ಮಶಿನ್
* ಟ್ರ್ಯಾಕ್ ಮೆಂಟೇನರ್–IV
* ಅಸಿಸ್ಟಂಟ್ ಬ್ರಿಡ್ಜ್
* ಅಸಿಸ್ಟಂಟ್ ಕ್ಯಾರೇಜ್ ಮತ್ತು ವ್ಯಾಗನ್
* ಅಸಿಸ್ಟಂಟ್ ಲೋಕೋ ಶೇಡ್ (ಇಲೆಕ್ಟ್ರಿಕಲ್)
* ಅಸಿಸ್ಟಂಟ್ ಪಿ. ವೇ.
* ಇತರೆ Group-D ಹುದ್ದೆಗಳು
ಹುದ್ದೆಗಳ ಸಂಖ್ಯೆ:-
* ಅಧಿಸೂಚನೆಯ ಪ್ರಕಾರ (ವಲಯವಾರು ಬೇರೆಯಾಗಿರುತ್ತದೆ).
* ಒಟ್ಟು 21997 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ತವ್ಯ ಸ್ಥಳ:-
* ಭಾರತದೆಲ್ಲೆಡೆ ಇರುವ ವಿವಿಧ ರೈಲ್ವೆ ವಲಯಗಳು
* ಅಭ್ಯರ್ಥಿಯನ್ನು ಇಲಾಖೆಯ ಅಗತ್ಯಕ್ಕೆ ಅನುಗುಣವಾಗಿ ನೇಮಕ ಮಾಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ:-
* ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು
* ಕೆಲವು ಹುದ್ದೆಗಳಿಗೆ ITI / NAC ಪ್ರಮಾಣಪತ್ರ ಅಗತ್ಯವಿರಬಹುದು.
ವಯೋಮಿತಿ:-
*ದಿನಾಂಕ 01/01/2026ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಾನ ಹೊಂದಿರಬೇಕು.
* ಕನಿಷ್ಠ: 18 ವರ್ಷ
* ಗರಿಷ್ಠ: 33 ವರ್ಷ
* SC / ST / OBC / ಇತರೆ ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ವೇತನ:-
*18,000 ರಿಂದ 56,900 (7ನೇ ವೇತನ ಆಯೋಗದ ಪ್ರಕಾರ)
* ಜೊತೆಗೆ DA, HRA, TA ಹಾಗೂ ಇತರೆ ಭತ್ಯೆಗಳು ಲಭ್ಯ.
ಆಯ್ಕೆ ವಿಧಾನ:-
ಅಭ್ಯರ್ಥಿಗಳ ಆಯ್ಕೆಯನ್ನು ಕೆಳಗಿನ ಹಂತಗಳ ಮೂಲಕ ಮಾಡಲಾಗುತ್ತದೆ:
1. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
2. ದೈಹಿಕ ಕಾರ್ಯಕ್ಷಮತೆ ಪರೀಕ್ಷೆ (PET)
3. ದಾಖಲೆ ಪರಿಶೀಲನೆ
4. ವೈದ್ಯಕೀಯ ಪರೀಕ್ಷೆ
ಉದ್ಯೋಗ ಮಾಹಿತಿ : ಕರ್ನಾಟಕ ಅಂಚೆ ಇಲಾಖೆ ನೇಮಕಾತಿ 2026
ಅರ್ಜಿ ಶುಲ್ಕ:-
* ಸಾಮಾನ್ಯ / OBC ಅಭ್ಯರ್ಥಿಗಳು: ಅಧಿಸೂಚನೆಯ ಪ್ರಕಾರ
* SC / ST / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಅಥವಾ ಕಡಿತ
ಅರ್ಜಿ ಸಲ್ಲಿಸುವ ವಿಧಾನ:-
* ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು
* ಅಧಿಕೃತ ರೈಲ್ವೆ ನೇಮಕಾತಿ ಮಂಡಳಿ (RRB) ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
* ಅರ್ಜಿ ಸಲ್ಲಿಸಲು ಇಲ್ಲಿ CLICK ಮಾಡಿ
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ:-
* ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ :- ಜನವರಿ 31, 2026
* ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ :- ಮಾರ್ಚ್ 2, 2026
* ಶುಲ್ಕ ಪಾವತಿಸಲು ಕೊನೆಯ ದಿನಾಂಕ :- ಮಾರ್ಚ್ 4, 2026
ಮುಖ್ಯ ಸೂಚನೆ:-
* ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪೂರ್ತಿಯಾಗಿ ಓದುವುದು ಕಡ್ಡಾಯ
* ತಪ್ಪು ಮಾಹಿತಿ ನೀಡಿದಲ್ಲಿ ಅಭ್ಯರ್ಥಿಯ ಅರ್ಜಿ ರದ್ದುಪಡಿಸಲಾಗುತ್ತದೆ.

0 ಕಾಮೆಂಟ್‌ಗಳು