PM KISAN 21st Installment: PM ಕಿಸಾನ್ ಯೋಜನೆಯ 21 ನೇ ಕಂತಿನ 2,000 ರೂ. ಬಿಡುಗಡೆ ದಿನಾಂಕ ನಿಗದಿ

ನವದೆಹಲಿ: ದೇಶದ ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21 ನೇ ಕಂತಿನ 2,000 ರೂಪಾಯಿ ಸಹಾಯಧನವನ್ನು ಪ್ರಧಾನಿ ನರೇಂದ್ರ ಮೋದಿ‌ ಅವರು ಬಿಡುಗಡೆ ಮಾಡುವ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಹಣವನ್ನು ನೇರವಾಗಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದೆ.





2019 ರಲ್ಲಿ ಆರಂಭವಾದ ಈ ಯೋಜನೆಯಡಿ, ಪ್ರತಿ ಅರ್ಹ ರೈತ ಕುಟುಂಬಕ್ಕೆ 4 ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಯಂತೆ 3 ಕಂತುಗಳಲ್ಲಿ ವರ್ಷಕ್ಕೆ 6 ಸಾವಿರ ರೂಪಾಯಿ ನೆರವು ನೀಡುತ್ತಾರೆ. ಕೇಂದ್ರ ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ, ಇದುವರೆಗೂ ದೇಶದ 11 ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ 3.70 ಲಕ್ಷ ಕೋಟಿ ರೂ. ನೆರವು ತಲುಪಿಸಲಾಗಿದೆ.

PM KISAN 21st Installment ಹಣ ಬಿಡುಗಡೆ ದಿನಾಂಕ:

PM ಕಿಸಾನ್ ಯೋಜನೆಯ 21 ನೇ ಕಂತಿನ 2,000 ರೂ. ಅನ್ನು ನವೆಂಬರ್ 19 ರಂದು ಮಧ್ಯಾಹ್ನ 2 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಇಲಾಖೆ ತಿಳಿಸಿದೆ.

ರೈತರ ದೂರು ಪರಿಹಾರಕ್ಕೆ ಹೊಸ ವ್ಯವಸ್ಥೆ:

ಯೋಜನೆಯ ಕುರಿತು ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ PM-KISAN ಪೋರ್ಟಲ್ ಮತ್ತು CPGRAMS ಮೂಲಕ ದೂರು ಸಲ್ಲಿಕೆ ವ್ಯವಸ್ಥೆಯನ್ನು ಬಲಪಡಿಸಿದೆ. ರೈತರು ತಮ್ಮ ಪಾವತಿ ಸ್ಥಿತಿ, ದಾಖಲೆ ತಿದ್ದುಪಡಿ, ಅರ್ಹತೆ ಹಾಗೂ ಇತರ ಪ್ರಶ್ನೆಗಳನ್ನು ನೇರವಾಗಿ ಪೋರ್ಟಲ್‌ನಲ್ಲಿ ನೋಂದಾಯಿಸಬಹುದಾಗಿದೆ.

PM ಕಿಸಾನ್‌ನ 21ನೇ ಕಂತು ಬಿಡುಗಡೆಯಾಗುವುದರಿಂದ ದೇಶದ 9 ಕೋಟಿ ರೈತ ಕುಟುಂಬಗಳಿಗೆ ಮತ್ತೊಂದು ಆರ್ಥಿಕ ನೆರವು ದೊರೆಯಲಿದೆ. ಜೊತೆಗೆ, ಸರ್ಕಾರ ತಂದಿರುವ ಡಿಜಿಟಲ್ ಪರಿಹಾರ ವ್ಯವಸ್ಥೆಗಳು ರೈತರ ದೂರು–ಮಾಹಿತಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು