U 19 World Cup 2026: ನ್ಯೂಜಿಲೆಂಡ್ ವಿರುದ್ಧ ಮಿಂಚಿದ ವೈಭವ್ - ಆಯುಷ್ ! ಭಾರತ ಅಜೇಯ ಓಟ | ಕಿವೀಸ್ ವಿರುದ್ಧ 7 ವಿಕೆಟ್ ನಿಂದ ಪಂದ್ಯ ಗೆದ್ದ ಭಾರತ

 U19 World Cup 2026: ನ್ಯೂಜಿಲೆಂಡ್ ವಿರುದ್ಧ ಮಿಂಚಿದ ವೈಭವ್ - ಆಯುಷ್ ! ಭಾರತ ಅಜೇಯ ಓಟ | ಕಿವೀಸ್ ವಿರುದ್ಧ 7 ವಿಕೆಟ್ ನಿಂದ ಪಂದ್ಯ ಗೆದ್ದ ಭಾರತ

ಸಿಸಿ(ICC) ಅಂಡರ್-19 ವಿಶ್ವಕಪ್ (World Cup) 2026 ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ (new zealand u-19 vs india u-19) ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿತು. ಬುಲವಾಯೋದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಂಡರ್ -19 ಪಂದ್ಯದಲ್ಲಿ ಭಾರತ ತಂಡವು ದ್ಲ್ಸ್ ನಿಯಮದ ಪ್ರಕಾರ ನ್ಯೂಜಿಲೆಂಡ್ ತಂಡವನ್ನು 7 ವಿಕೆಟ್ ನಿಂದ ಸೋಲಿಸಿತು.





ಪಂದ್ಯ ನಡೆದ ಗೆದ್ದ ನಂತರ ಭಾರತ ಲೀಗ್ ಹಂತದ ಮೂರೂ ಪಂದ್ಯಗಳನ್ನು ಗೆದ್ದು(u19 ind vs nz 2026) ತನ್ನ ಸಾಮಾರ್ಥ್ಯವನ್ನು ತೆರೆದಿರಿಸಿದೆ. ಶನಿವಾರ ಮಳೆಯಿಂದ ಅಡಚಣೆಗೊಳಗಾದ ನ್ಯೂಜಿಲ್ಯಾಂಡ್ ಎದುರಿನ ಪಂದ್ಯವನ್ನು ಭಾರತ ಡಿ.ಎಲ್.ಸ್. ನಿಯಮದಂತೆ 7 ವಿಕೆಟ್ ಗಳಿಂದ ವಿಯಜ ಜಯಿಸಿತು.


ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಆಯುಷ್ ಮ್ಹಾತ್ರೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆರ್.ಎಸ್. ಅಂಬ್ರಿಸ್ ಅವರ ನಾಲ್ಕು ವಿಕೇಟ್ ಗ ಸಾಧನೆಗೆ ನ್ಯೂಜಿಲೆಂಡ್ ತಂಡವು 36.2  ಓವರ್‌ಗಳಲ್ಲಿ  135 ರನ್ ಗಳಿಗೆಲೌಟ್ ಆಯಿತು. ನಂತರ ವೈಭವ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಸ್ಪೋಟಕ ಬ್ಯಾಂಟಿಂಗ್ ನಿಂದ ಭಾರತ 13.3 ರ್ ಗಳಲ್ಲಿ ಗುರಿ ತಲುಪಿತು. ಭಾರತ ಯುವ ತಂಡವು ಸಿಸಿ ಅಂಡರ್ -19 ವಿಶ್ವಕಪ್ 2026(U19 World Cup 2026) ರಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ.


ನ್ಯೂಜಿಲೆಂಡ್ ವಿರುದ್ಧದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ(India vs New Zealand) ಸುಲಭ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಡಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳ ಮುಂದೆ ಪೆವಿಲಿಯನ್ ಪರೇಡ್ ನಡೆಸಿದರು. ಹೀಗಾಗಿ ಇಡೀ ತಂಡವು 135 ಸ್ಕೋರ್‌ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತದ ಪಾರ ಸ್ಟಾರ್  ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಮಿಂಚಿನ ಪ್ರದರ್ಶನ ನೀಡಿ ತಂಡವನ್ನು ಸುಲಭ ಗೆಲುವಿನತ್ತ ಕೊಂಡೊಯ್ದಿತು.


ಅಗ್ರ ಕ್ರಮಾಂಕ ಡಮಾರ್!

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಅಗ್ರ ಕ್ರಮಾಂಕ ಬ್ಯಾಟರ್ಸ್ ದೊಡ್ಡ ಸ್ಕೋರ್ ಗಳಿಸುವಲ್ಲಿ ವಿಫಲರಾದ ಕಾರಣ ತಂಡದ ಅರ್ಧದಷ್ಟು ಭಾಗ 22 ರನ್‌ಗಳಿಗೆ ಔಟಾಯಿತು. ಆರಂಭಿಕ ಆಟಗಾರ ಹ್ಯೂಗೋ ಬೋಗ್ 4 ರನ್ ಗಳಿಸಿದರು. ನಾಯಕ ಟಾಮ್ ಜೋನ್ಸ್ 10 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಲು ಸಾಧ್ಯವಾಯಿತು. ಮತ್ತೋಬ್ಬ ಆರಂಭಿಕ ಆಟಗಾರ ಆರ್ಯನ್ ಮಾನ್ 21 ಎಸೆತಗಳಲ್ಲಿ 5 ರನ್ ಗಳಿಸಿದರೆ, ವಿಕೆಟ್ ಕೀಪರ್ ಮಾರ್ಕೊ ಆಲ್ಪೆ 1 ರನ್ ಗಳಿಸಿದರು.


ಬೌಲಿಂಗ್‌ನಲ್ಲಿ ಮಿಂಚಿದ ಅಂಬ್ರಿಸ್

ಬುಲವಾಯೊದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ತಲಾ 37 ಓವರ್‌ಗಳಿಗೆ ಕಡಿತಗೊಂಡಿತು. ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮಳೆ ಆರಂಭದಲ್ಲೇ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು ಮೊದಲು ಮೂರು ಓವರ್‌ಗಳಷ್ಟು, ನಂತರ ಮತ್ತೆ 10 ಓವರ್‌ಗಳಷ್ಟು ಕಡಿತಗೊಳಿಸಲಾಯಿತು.

ಪುನರಾರಂಭವಾದ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ನ್ಯೂಜಿಲೆಂಡ್ ತಂಡವನ್ನು 36.2 ಓವರ್‌ಗಳಲ್ಲಿ ಕೇವಲ 135 ರನ್‌ಗಳಿಗೆ ಆಲೌಟ್ ಮಾಡಲಾಯಿತು. ನ್ಯೂಜಿಲೆಂಡ್ ಪರ ಕ್ಯಾಲಮ್ ಸ್ಯಾಮ್ಸನ್ ಅಜೇಯ 37 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಆಗಿದರು. ಸೆಲ್ವಿನ್ ಸಂಜಯ 28 ರನ್‌ ಗಳಿಸಿದರು. ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಮೊತ್ತ ಸೇರಿಸಲು ವಿಫಲರಾದರು.

ಭಾರತದ ಪರ ಆರ್.ಎಸ್. ಅಂಬ್ರಿಸ್ ನಾಲ್ಕು ವಿಕೆಟ್‌ಗಳನ್ನು ಪಡೆದು ಬೌಲಿಂಗ್‌ನಲ್ಲಿ ಮಿಂಚಿದರು. ಹೆನಿಲ್ ಪಟೇಲ್ ಮೂರು ವಿಕೆಟ್‌ಗಳನ್ನು ಪಡೆದರು. ಖಿಲನ್ ಪಟೇಲ್, ಮೊಹಮ್ಮದ್ ಇನಾನ್ ಹಾಗೂ ಕನಿಷ್ಕ್ ಚೌಹಾಣ್ ತಲಾ ಒಂದು ವಿಕೆಟ್‌ ಪಡೆದರು. ಒಟ್ಟಾರೆ ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ನ್ಯೂಜಿಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿತು.



ಇನ್ನಷ್ಟು ಓದಿ :SSLC ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್: ಭಾರತೀಯ ಅಂಚೆ ಇಲಾಖೆಯಲ್ಲಿ 28,740 ಹುದ್ದೆಗಳ ನೇಮಕಾತಿ |Post Office Recruitment 2026


ವೈಭವ್, ಆಯುಷ್ ಸ್ಫೋಟಕ ಬ್ಯಾಟಿಂಗ್

ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಅವರ ಸ್ಫೋಟಕ ಬ್ಯಾಟಿಂಗ್ ಭರ್ಜರಿ ಆರಂಭ ನೀಡಿತು. ಆರನ್ ಜಾರ್ಜ್ ಶೀಘ್ರದಲ್ಲೇ ಔಟಾದರೂ, ಎರಡನೇ ವಿಕೆಟ್‌ಗೆ ವೈಭವ್–ಆಯುಷ್ ಜೋಡಿ ಕೇವಲ 39 ಎಸೆತಗಳಲ್ಲಿ 76 ರನ್‌ಗಳ ಜೊತೆಯಾಟ ನಡೆಸಿ ಪಂದ್ಯವನ್ನು ಸಂಪೂರ್ಣವಾಗಿ ಭಾರತದ ಪರವಾಗಿ ತಿರುಗಿಸಿದರು. ವೈಭವ್ 23 ಎಸೆತಗಳಲ್ಲಿ 40 ರನ್ ಗಳಿಸಿದರೆ, ನಾಯಕ ಆಯುಷ್ 27 ಎಸೆತಗಳಲ್ಲಿ 53 ರನ್‌ಗಳ ನಾಯಕತ್ವದ ಇನ್ನಿಂಗ್ಸ್ ಆಡಿದರು. ನಂತರ ವಿಹಾನ್ ಮಲ್ಹೋತ್ರಾ (ಅಜೇಯ 17) ಮತ್ತು ವೇದಾಂತ್ ತ್ರಿವೇದಿ (ಅಜೇಯ 13) ತಂಡವನ್ನು ಸುಲಭ ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ಭಾರತ ತಂಡ 13.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.


ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು